Yelu Bettada Odeya Madayya-文本歌词

Yelu Bettada Odeya Madayya-文本歌词

Sri Guru
发行日期:

ಎಪ್ಪತ್ತೇಳು ಮಲೆಯ ಸಿಂಡಿಯ ಸುತ್ತಿ

ತಲೆದಿಂಬು ಮಾಡಿ ಮಡಗಿದ

ಮೈಕಾರ ಮಾದಪ್ಪನಿಗೆ

ಉಘೇ ಉಘೇ

ಉತ್ತರಾದಿ ಬೆನ್ನಮಜ್ಜಯ್ಯ ಸೀಳಿಬಂದ

ಮುದ್ದಿನಾ ಕಂದ

ಠಕ್ಕ ಉಕ್ಕಿನ ಬಸವನ ಗೆದ್ದ

ಮುಕ್ಕಣ್ಣ ಮಾದಪ್ಪನಿಗೇ

ಉಘೇ ಉಘೇ

ಉಘೇ ಉಘೇ

ಏಳು ಬೆಟ್ಟದ ಒಡೆಯ ಮಾದಯ್ಯ

ನೀನ ಪಾದ ಚರಣಕೆ ಶರಣ ನಾನಯ್ಯಾ

ಭಯವು ತುಂಬಿದ ಶಿಕರವು ಶಾಂತಿ ನಿನ್ನ ಮಂತ್ರವು

ಕಸ್ತ ಎಂದರೇ ಓಡಿ ಬರುವೆ

ನಿನ್ನ ಭಖರ ಕೈಯ ಹಿಡಿಯೆ

ನನ್ನ ಪಾಪವ ದೂರ ಮಾಡು

ನಿನ್ನ ಪಾದದ ದೂಳಿನಿಂದ

ಅಜ್ಞಾನವನ್ನು ಮುಕ್ತಗೊಳಿಸು ನಿನ್ನ ಕರೆಗಳ ಸ್ಪರ್ಶದಿಂದ

ಮೃಗದ ಮನಸಿನ ನಾನು ಮಗುವಂತೆ ಮಾಡು ನಾನು

ಪ್ರೀತಿಯಿಂದ ಜಗವ ಗೆಲ್ಲುವ ಮಂತ್ರವನ್ನು ಹೇಳು ಬಾ

ಮಾದೇವ ಮಾದೇವ

ಏಳು ಬೆಟ್ಟದ ಒಡೆಯ ಮಾದಯ್ಯ

ನೀನ ಪಾದ ಚರಣಕೆ ಶರಣ ನಾನಯ್ಯಾ

ಏಳು ಬೆಟ್ಟದ ಒಡೆಯ ಮಾದಯ್ಯ

ನೀನ ಪಾದ ಚರಣಕೆ ಶರಣ ನಾನಯ್ಯಾ

ಕರುಣೆ ತುಂಬಿದ ಕಡಲು ನೀನು

ನಿನ್ನ ಪಾದದ ಧೂಳು ನಾನು

ಮಮತೆ ತುಂಬಿದ ಮುಗಿಲು ನೀನು

ನಿನ್ನ ಸೇವೆಗೆ ಸಿದ್ದ ನಾನೂ

ಈ ಜನ್ಮವೆಲ್ಲಾ ಕಲಿಯುವೆ

ನಿನ್ನ ಸೇವೆಯಲ್ಲಿಯೇ

ಈ ಜನ್ಮವೆಲ್ಲಾ ಕಲಿಯುವೆ

ನಿನ್ನ ಸೇವೆಯಲ್ಲಿಯೇ

ಈ ಉಸಿರು ನಿಂತರು ದುಃಖವಿಲ್ಲ ಕೇಳು ದುಂಡು ಮಾದಯ್ಯ